ಕನ್ನಡದ ಕಂಪಿನಲ್ಲಿ ಜ್ಞಾನವ ಕಲಿಸೋಣ
ಕನ್ನಡದ ಸಿರಿಯ ಸಂಸ್ಕೃತಿಯ ಬೆಳಸೋಣ
ಕನ್ನಡ ಪರಂಪರೆಯ ಬೆಳಕನ್ನು ಬೆಳಗೋಣ
ಕನ್ನಡ ನುಡಿಯ ಮೌಲ್ಯಗಳನ್ನು ಸಾರೋಣ
ಕನ್ನಡದ ಕಾಂತಿಯನ್ನು ಎಲ್ಲೆಡೆ ಹರಡೋಣ
ಕನ್ನಡ ನಾಡಿನ ಎಲ್ಲರ ಹೃದಯದಲ್ಲಿ ಪ್ರೀತಿಯ ಚಿಗುರೊಡೆಸೋಣ
ನಮ್ಮ ತಾಯ್ನುಡಿಯ ಸೌಂದರ್ಯವ ಜಗಕೆ ತೋರಿಸೋಣ
ಕನ್ನಡ ನಾಡಿಗೆ ಗೌರವದ ತಾರೆಗಳನ್ನು ಕಟ್ಟೋಣ!
ಅಂಕುರ ಕನ್ನಡ ಸಂಘ
ಜ್ಯೋತಿ ನಿವಾಸ್ ಪಿಯು ವಿಭಾಗದ ಕನ್ನಡದ ಕನಸಿನ ಕೂಸು ಎಲ್ಲರಲ್ಲೂ ಕನ್ನಡ ಚಿಗುರು ಮೂಡಿಸುವ ಪ್ರಯತ್ನವನ್ನು ಮಾಡುತ್ತದೆ. ಅದು ಸಫಲತೆಯನ್ನು ಕಾಣುವ ಹಾದಿಯಲ್ಲಿದೆ. ನಮ್ಮ ನಾಡಿನ ಮಹಾನ್ ಉತ್ಸವವಾದ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ಈ ದಿನ ಕನ್ನಡ ಭಾಷೆಯ ಮಹತ್ವವನ್ನು ಸಾರುತ್ತ, ನಾಡಿನ ಪರಂಪರೆಯನ್ನು ಮೆಲುಕು ಹಾಕುತ್ತಾ, ನಾಡು-ನುಡಿ, ಕಲೆ, ನೃತ್ಯ, ಸಂಸ್ರ್ಕತಿ, ಸಾಹಿತ್ಯಕ್ಕೆ ಗೌರವ ಸಲ್ಲಿಸುತ್ತಾ, ಕನ್ನಡಿಗರ ಆಶಯವನ್ನು ಕನ್ನಡಿಗರ ನಡುವೆ ಮಾತ್ರವಲ್ಲ, ಬೇರೆ ಭಾಷಿಗರಲ್ಲೂ ಕನ್ನಡ ಪ್ರೀತಿಯ ಬೆಸುಗೆ, ಭಾವೈಕ್ಯತೆ ಹೆಚ್ಚಿಸುವ ಹಬ್ಬ ನಮ್ಮ ಕಾಲೇಜಿನ ನಾಡಹಬ್ಬ, ನಾಡಿನ ತಾಯ್ನುಡಿಯ ಹಿರಿಮೆಯನ್ನು ಎಲ್ಲೆಡೆ ಹರಡಲು ಪ್ರತಿಯೊಬ್ಬ ಕನ್ನಡಿಗನು ಹೃದಯಪೂರ್ವಕವಾಗಿ ಪ್ರತಿ ನವೆಂಬರ್ ನಲ್ಲಿ ಆಚರಿಸಲಾಗುತ್ತದೆ
M.A. (HOD)
M.A, B.Ed
M.A, B.Ed